
11th April 2025
ಜಿಎಂ ನ್ಯೂಜ್ ಕುಷ್ಟಗಿ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮತ್ತು ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯ ಚುನಾವಣೆ ನಿಮಿತ್ಯ ಅಶೋಕ್ ಹಾರನಹಳ್ಳಿ ರವರ ಬೆಂಬಲಿತ ಅಧ್ಯಕ್ಷೀಯ ಅಭ್ಯರ್ಥಿಯಾದ ವೇದಬ್ರಹ್ಮ ಬಾನುಪ್ರಕಾಶ್ ಶರ್ಮ ರವರ ಹಾಗೂ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯಾದ ಗುರುರಾಜ್ ಜೋಶಿ ರವರ ಪರವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯ ಪ್ರಚಾರವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದಲ್ಲಿ ದಿನಾಂಕ : 10-04-2025 ಗುರುವಾರದಂದು ವಿಪ್ರ ಮಹನೀಯರ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳಲಾಯಿತು.
ಕುಷ್ಟಗಿ ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ತಿಮ್ಮಪ್ಪಯ್ಯ ದೇಸಾಯಿ ಕಾಟಾಪುರ ಇವರ ಮನೆಗೆ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯಾದ ಗುರುರಾಜ್ ಜೋಶಿ ಅವರು ತಮ್ಮ ತಂಡದವರೊಂದಿಗೆ ಚುನಾವಣೆಯ ಪ್ರಚಾರದ ನಿಮಿತ್ಯ ಭೇಟಿ ನೀಡಿದರು. ಇದೇ ಏಪ್ರಿಲ್ ತಿಂಗಳು 13ನೇ ತಾರೀಕಿನಂದು ಕೊಪ್ಪಳದಲ್ಲಿ ನಡೆಯುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮತ್ತು ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯ ಚುನಾವಣೆ ನಿಮಿತ್ಯ ಅಶೋಕ್ ಹಾರನಹಳ್ಳಿ ರವರ ಬೆಂಬಲಿತ ಅಧ್ಯಕ್ಷೀಯ ಅಭ್ಯರ್ಥಿಯಾದ ವೇದಬ್ರಹ್ಮ ಬಾನುಪ್ರಕಾಶ್ ಶರ್ಮ ರವರ ಕ್ರಮ ಸಂಖ್ಯೆ 1 ಹಾಗೂ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ಗುರುರಾಜ್ ಜೋಶಿ ಕ್ರಮ ಸಂಖ್ಯೆ 1 ಇವರಿಗೆ ಮತವನ್ನು ನೀಡಬೇಕೆಂದು ಮನವಿ ಮಾಡಿದರು ಹಾಗೂ ಕೃಷ್ಣ ಆಶ್ರಿತ್ ವಕೀಲರ ಮನೆಗೆ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ಗುರುರಾಜ್ ಜೋಶಿ ತಮ್ಮ ತಂಡದವರೊಂದಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ನಂತರ ಕುಷ್ಟಗಿ ನಗರದ ಆರಾಧ್ಯ ದೇವರಾದ ಶ್ರೀ ಅಡವಿ ಮುಖ್ಯಪ್ರಾಣ ದೇವರ ದೇವಸ್ಥಾನಕ್ಕೆ ಭೇಟಿ ನೀಡಿದ ತಂಡವು ಶ್ರೀ ಅಡವಿರಾಯನ ದರ್ಶನ ಪಡೆದರು.
ಇದೇ ವೇಳೆ ಮುಖಂಡರಾದ ವೇಣುಗೋಪಾಲ್ ಆಚಾರ್ ಜಾಗೀರದಾರ್, ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ಗುರುರಾಜ್ ಜೋಶಿ, ಮತ್ತು ಸುರೇಶ್ ದೇಸಾಯಿ ಮಾಜಿ ಅಧ್ಯಕ್ಷರು ನಗರಸಭೆ ಕೊಪ್ಪಳ, ಮಂಜುನಾಥ ಹಳ್ಳಿಕೇರಿ ಚುನಾವಣೆ ಪ್ರಚಾರದ ನಿಮಿತ್ಯ ಮಾತನಾಡಿದರು.
ಈ ಸಂಧರ್ಭದಲ್ಲಿ ಕುಷ್ಟಗಿ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ತಿಮ್ಮಪ್ಪಯ್ಯ ದೇಸಾಯಿ ಕಾಟಾಪುರ, ಕೃಷ್ಣ ಆಶ್ರಿತ್ ವಕೀಲರು, ವೆಂಕಟೇಶ ಮಠದ್, ಭೀಮಸೇನರಾವ್ ಕುಲಕರ್ಣಿ ಬನ್ನೆಟ್ಟಿ, ಹಾಗೂ
ಸುರೇಶ್ ಗಾವರಾಳ, ರಾಜೇಂದ್ರ ಬಿಸರಳ್ಳಿ, ಹೆಚ್ ಬಿ ದೇಶಪಾಂಡೆ, ವೇಣುಗೋಪಾಲ್ ಆಚಾರ್ ಜಾಗೀರದಾರ್. ರಾಮಮೂರ್ತಿ ಸಿದ್ಧಾಂತಿ, ನಾಗೇಶರಾವ್ ದೇಶಪಾಂಡೆ, ಮಂಜುನಾಥ ಹಳ್ಳಿಕೇರಿ. ಪ್ರಹ್ಲಾದ ಬನ್ನೇಗೋಳ, ಅನಿಲ್ ಜೋಶಿ, ಅರವಿಂದ ಕುಲಕರ್ಣಿ, ಚಿದಂಬರ ದೇಶಪಾಂಡೆ, ರವಿ ಕುಲಕರ್ಣಿ, ಪ್ರಕಾಶ್ ಜೋಶಿ, ಗೋಪಾಲಕೃಷ್ಣ ಜೋಶಿ, ರಾಮಕೃಷ್ಣ ಕುಲಕರ್ಣಿ, ಸಂಜಯ ವೈದ್ಯ, ಹಾಗೂ ಕುಷ್ಟಗಿ ನಗರದ ವಿಪ್ರ ಬಾಂಧವರು ಭಾಗವಹಿಸಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮತ್ತು ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯ ಚುನಾವಣೆ ನಿಮಿತ್ಯ ಅಶೋಕ್ ಹಾರನಹಳ್ಳಿ ರವರ ಬೆಂಬಲಿತ ಅಧ್ಯಕ್ಷೀಯ ಅಭ್ಯರ್ಥಿಯಾದ ವೇದಬ್ರಹ್ಮ ಬಾನುಪ್ರಕಾಶ್ ಶರ್ಮ ರವರ ಹಾಗೂ ಕೊಪ್ಪಳ ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯಾದ ಗುರುರಾಜ್ ಜೋಶಿ ರವರ ಪರವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯ ಪ್ರಚಾರವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದಲ್ಲಿ ದಿನಾಂಕ : 10-04-2025 ಗುರುವಾರದಂದು ವಿಪ್ರ ಮಹನೀಯರ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳಲಾಯಿತು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧಗಳ ತಡೆಗೆ ಸೂಕ್ತ ಕ್ರಮ ಸಹಾಯವಾಣಿ-೧೯೩೦ ಹಾಗೂ ವೆಬ್ಬಾಟ್ ಉನ್ನತೀಕರಣ
ಏ.24 ರಂದು ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ
ಅಲೆಮಾರಿ ಸಮುದಾಯ ಜನರಿಗೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಲಾಗಿದೆ ಜಾಗೃತಿ ಮೂಡಿಸಿ ಸವಲತ್ತು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು -ಪಲ್ಲವಿ ಜಿ.